ಚನ್ನಪ್ಪ ವೀರಭದ್ರಪ್ಪ ಕರಡಿ

(1927- ). ಕರ್ನಾಟಕದ ಜನಪದ ಕಲೆಯ ಒಂದು ಪ್ರಕಾರವಾದ ಕರಡಿ ಮಜಲು ಕಲೆಯನ್ನು ಉಳಿಸಿ, ಬೆಳೆಸಲು ನಿರಂತರ ಶ್ರಮಿಸುತ್ತಿರುವ ಒಬ್ಬ ಹಿರಿಯ ಕಲಾವಿದ ಚನ್ನಪ್ಪ ವೀರಭದ್ರ ಕರಡಿ. ಬಾಗಲ ಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಹಾಲಿಂಗಪೂ ಇವರ ಹುಟ್ಟೂರು. 1927ರ ಜನವರಿ 8ರಂದು ಜನನ. ತಂದೆ ವಿರಭದ್ರಪ್ಪ ರುದ್ರಪ್ಪ ಕರಡಿ, ಪ್ರತಿಭಾವಂತ ಕರಡಿ ಮಜಲು ಕಲಾವಿದ ತಾಯಿ ವಿ. ಗೌರವ್ವ ಗೃಹಿಣಿ. ಕನ್ನಡ ಮುಲ್ಕಿಪರೀಕ್ಷೆಯವರೆಗಿನ ಶಿಕ್ಷಣ. ಹದಿನೇದನೇ ವಯಸ್ಸಿನಲ್ಲಿ ತಂದೆ ಕಲಾಜ್ಯೋತಿ ವೀರಭದ್ರಪ್ಪ ಕರಡಿಯವರಿಂದಲೇ ಜಾನಪದ ಕಲೆಯಲ್ಲಿ ಮಾರ್ಗದರ್ಶನ. ಶ್ರದ್ಧೆಯಿಂದ ಅಭ್ಯಾಸ.ತಮ್ಮ ವಂಶಪಾರಂಪರ್ಯವಾಗಿ ಬೆಳೆದ ಬಂದ ಕಲೆಯನ್ನು ಪೋಷಿಸಿ, ಬೆಳಸುವ ಸಂಕಲ್ಪ ಮಾಡಿರುವ ಚನ್ನಪ್ಪ ಕರಡಿ, ದೇಶ, ವಿದೇಶಗಳಲ್ಲಿ ಪ್ರದರ್ಶಿಸಿದ್ದಾರೆ. ಚನ್ನಪ್ಪ ಕರಡಿಯವರ ಕಲಾಯಂತ್ರ ಆರಂಭವಾದುದು. 1960ರಲ್ಲಿ ದೆಹಲಿಯಲ್ಲಿ. ದೆಹಲಿಯಲ್ಲೇ 1960, 1968ರಲ್ಲಿ ಪ್ರದರ್ಶಗಳನ್ನಿತ್ತರು. ರಾಜಸ್ಥಾನ್, ಗುಜರಾತ್, ಪಶ್ಚಿಮ ಬಂಗಾಳ, ಅಸ್ಸಾಂ, ಮಣಿಪುರ, ಜಮ್ಮು, ಕಾಶ್ಮಿರ, ಮಹಾರಾಷ್ಟ್ರದ ಮುಂಬೈ, ಪುಣೆ, ನಾಗಪುರ, ಓರಿಸ್ಸಾ, ತಮಿಳುನಾಡು, ಆಂಧ್ರ, ಕೇರಳ ಹೀಗೆ ನಾಡಿನ ಉದ್ದಗಲಗಳಲ್ಲಿ ಪ್ರವಾಸ ಮಾಡಿ ಪ್ರದರ್ಶನಗಳನ್ನಿತ್ತಿದ್ದಾರೆ. ಜನಮನ ಗೆದ್ದಿದ್ದಾರೆ. ಕನ್ನದ ನಾಡಿನ ಈ ಗಂಡು ಕಲೆಗೆ ಒಂದು ಗೌರವ ಸ್ಥಾನ ಕಲ್ಪಿಸಿದ್ದಾರೆ. ರಾಷ್ಟ್ರನಾಯಕರಾದ ಬಾಬು ರಾಜೇಂದ್ರಪ್ರಸಾದ್, ಜವಹರಲಾಲ್ ನೆಹರು, ಇಂದಿರಾಗಾಂಧಿ, ಶಂಕರದಯಾಳ ಶರ್ಮ, ರಾಜೀವ್ ಗಾಂಧಿ ಮತ್ತು ರಾಜ್ಯದ ಎಲ್ಲ ವರಿಷ್ಠರ ಮುಂದೆ ತಮ್ಮ ಹಾಗೂ ತಮ್ಮ ತಂಡದ ಕಲಾ ಕೌಶಲವನ್ನು ಪ್ರಸರ್ಶಿಸಿ ಮೆಚ್ಚುಗೆಗಳಿಸಿದ್ದಾರೆ.

ಕರಡಿ ಮಜಲನ್ನು ಒಂದು ಅಭಿವ್ಯಕ್ತಿ ಮಾಧ್ಯಮವಾಗಿ ನಿರೂಪಿಸಿ, ಅದಕ್ಕೊಂದು ಗಣ್ಯ ಸ್ಥಾನ ದೊರೆಯುವುದರಲ್ಲಿ ಸಫಲರಾಗಿರುವ ಚನ್ನಪ್ಪ ಕರಡಿಯವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳ ದೊರೆತಿವೆ. ಕರ್ನಾಟಕ ಸರ್ಕಾರದ 2004ನೇ ಸಾಲಿನ ಜಾನಪದಶ್ರೀ ಪ್ರಶಸ್ತಿಯಿಂದಲೂ ಪುರಸ್ಕøತರಾಗಿದ್ದಾರೆ. 									(ಎಂ.ಬಿ.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ